Monday, December 27, 2010

ವಿಂಡೋಸ್ ಅವಾಂತರ

ಒಬ್ಬ ಹಮ್ಮುಗ(programmer)ನಿಗೆ ವಿಂಡೋಸ್ ಅಂದರೆ ಅಷ್ಟಕ್ಕೆ ಅಷ್ಟೇನೇ. ಒಂದಲ್ಲ ಒಂದು ತೊಡಕು ಕಾಣಿಸಿಕೊಳ್ಳುತ್ತಲೇ ಇರುತ್ತೆ. ಹಿಂದಿನ ಬರಹದಲ್ಲಿ ಕೊಟ್ಟ ಹಮ್ಮು(program) ವಿಂಡೋಸ್ ಅಲ್ಲಿ ಕೆಲಸ ಮಾಡಿಸಬೇಕು ಅಂದರೆ ಕೊಂಚ ಎಚ್ಚರ ವಹಿಸಬೇಕು. ಏನು, ಯಾಕೆ ಅಂತ ಹೇಳುವುದಕ್ಕೆ ಮೊದಲು ಆ ಬರಹದಲ್ಲಿ ಕೊಟ್ಟಿದ್ದ .properties ಕಡತವನ್ನು ಗಮನಿಸಿ:

            ###
            username=username
            password=password
            search_prefix=ಕ
            wiki=kn.wiktionary.org
            output_file=out.txt

ಈ ಕಡತವನ್ನ ನೋಟ್-ಪ್ಯಾಡ್ ಅಲ್ಲಿ ಬರೆದು ಯು.ಟಿ.ಎಫ್ ಮಾರ್ಬರಹ(encoding)ದಲ್ಲಿ ಉಳಿಸಿ ಹಮ್ಮು ಓಡಿಸಿದ್ದೆ. ಸರಿಯಾಗೇ ಓಡಿತ್ತು. ಆದರೆ ಮೊದಲನೇ ಸಾಲಿನ ಅನಿಸಿಕೆ (comment - ####)ಯನ್ನು ತೆಗೆದು ಹಾಕಿ ಓಡಿಸಿದಾಗ ಪಾಪ ನಮ್ಮ ಹಮ್ಮು 'username' ಅನ್ನು ಸರಿಯಾಗಿ ಓದದೆ  '.username' ಅಂತ ಓದಿ, ಹೊಗುತೆ(login)ಯೇ ತೇರಮೆ (failure) ಕಂಡಿತು. ಯಾಕೆ ಅಂತ ಕೊಂಚ ವಿಕಿಪೀಡಿಯ ಹುಡುಕಿದಾಗ ತಿಳಿಯಿತು, ವಿಂಡೋಸ್ ನೋಟ್-ಪ್ಯಾಡಿನ ತೊಂದರೆ ಅಂತ. ಆ ವಿಕಿಪೀಡಿಯ ಬರಹದ ಈ ಸಾಲು ಓದಿ:

Many Windows programs (including Windows Notepad) add the bytes 0xEF, 0xBB, 0xBF at the start of any document saved as UTF-8. This is the UTF-8 encoding of the Unicode byte order mark (BOM), and is commonly referred to as a UTF-8 BOM, even though it is not relevant to byte order.

ಆದರೆ ನನಗೆ ಕಾಣಿಸಿಕೊಂಡ ಬಾಮ್(BOM) 0xFEFF. ಮತ್ತು ಮೇಲೆ ಹೇಳಿದಂತೆ ಒಂದಲ್ಲ, ಎರಡು ಎಂಕೆ(byte)ಯಷ್ಟು. ಇದೊಂದು ಬಿಟ್ಟರೆ ಕಡತದ್ಲ್ಲಿರೋ ಬೇರೆ ಎಲ್ಲ ಬರಿಗೆ(caracter)ಗಳೂ ಸರಿಯಾಗಿಯೇ ಬಂದಿದ್ದವು. ನಾನು ಬಳಸುತ್ತಿರುವುದು ವಿಂಡೋಸ್ ಎಕ್ಸ್.ಪಿ. ಆದರೆ ಬೇರೆ ವಿಂಡೋಸ್ಗಳಲ್ಲಿ ಬಾಮ್ ಆಗಿ ಎಷ್ಟು ಎಂಕೆ(byte)ಗಳು ಇರುತ್ತವೋ, ಅವುಗಳ ಬೆಲೆ ಏನೋ, ಯಾರಿಗೆ ಗೊತ್ತು? ಅವುಗಳೆಲ್ಲವನು ಓರುತ್ತ ಕೂತ್ಕೊಳ್ಳೋದಕ್ಕೆ ಆಗಲ್ಲ.

ಅದಕ್ಕೆ ಒಂದು ಸಣ್ಣ ಬಗೆಹರಿಕೆ(solution) ಇದೆ. ಮೊದಲನೇ ಸಾಲಿನಲ್ಲಿ ಯಾವುದೇ ಒಳುಪು(property)ಗಳನ್ನು ಹಾಕದಿರಿ. ಮೊದಲನೇ ಸಾಲು ಬರಿದಾಗಿ ಬಿಡಿ ಇಲ್ಲ ಅಂದರೆ ನಾನು ಮಾಡಿದ ಹಾಗೆ ಅನಿಸಿಕೆ (## ) ಹಾಕಿ. ಈ ತೊಂದರೆ ಕಣ್ಮರೆಯಾಗುತ್ತದೆ. ಆದರೆ ಯೂನಿಕ್ಸ್  ಇಡಿವಳಿ(system)ಗಳಲ್ಲಿ ಈ ತೊಂದರೆ ಇಲ್ಲ.

3 comments:

ಕನ್ನಡtech said...

ಹಮ್ಮು = program
ಹಮ್ಮುಗ = programmer

ಮಾರ್ಬರಹ = encoding

ಎಂಕೆ <-ಎಣ್ಕೆ = ಎಣ್ + ಅಂಕೆ = Byte

ಹೊಗುತೆ = login (n)

ಬರಿಗೆ = character

ಇಡಿವಳಿ = system (ಒಂದು ಸಿಸ್ಟಂ ಅಲ್ಲಿ ಅದರ ಬಿಡಿ ಪಾಲುಗಳು ಒಟ್ಟುಗೂಡಿ ಒಂದು ಇಡಿ entity ಆಗಿ ಕೆಅಲ್ಸ ಮಾಡುತ್ತವೆ. ಅದಕ್ಕೆ ಈ ಪದವನ್ನ ಬಳಸಿದ್ದೇನೆ)

ಒಳುಪು = property
ಬೆಲೆ = value

ಬಗೆಹರಿಕೆ = solution

Unknown said...

ಚೆನ್ನಾಗಿದೆ...ನನ್ನಿ...ಹೀಗೆ ಬರೀತ ಇರಿ

ಸವಿಯೊದಗು

ಹದುಳವಿರಲಿ,
ಬರತ್

ಕನ್ನಡtech said...

@Bharath, ನಿಮ್ಮ ಹೊಗಳಿಕೆಗೆ ನನ್ನಿ :-)